<ಗದುಗಿನ ಭಾರತ ಪದಕೋಶ
ಯ, 
1.		ಯಂತ್ರರೂಪುಗಳು, ಅಧೀನ ಬೊಂಬೆಗಳು (ಜೀವಿಗಳು), ಭೀಷ್ಮ ಪರ್ವ,7,31
2.		ಯಂತ್ರಿ, ಸೂತ್ರಧಾರ (ಬೊಂಬೆಯಾಟದವನು) ಹಾಹೆ, ಭೀಷ್ಮ ಪರ್ವ,7,31
3.		ಯಕ್ಷಕರ್ದಮ, ಸುಗಂಧ ಲೇಪನ, ಆದಿ ಪರ್ವ,16,28
4.		ಯಕ್ಷಕರ್ದಮ, ಸುಗಂಧಲೇಪನ ದ್ರವ್ಯ, ಸಭಾ ಪರ್ವ,2,90
5.		ಯಜಮಾನ, ಯಜ್ಞದೀಕ್ಷಿತನಾಗಿ ಯಜ್ಞವನ್ನು ಮಾಡುವವನು, ಗದಾ ಪರ್ವ,11,60
6.		ಯತಿಪತಿ, ಮುನಿಶ್ರೇಷ್ಠರು, ಗದಾ ಪರ್ವ,13,17
7.		ಯಮಜ, ಯಮನಿಂದ ಜನಿಸಿದವ, ಉದ್ಯೋಗ ಪರ್ವ,2,39
8.		ಯಮನಂದನ, ಧರ್ಮರಾಯ, ವಿರಾಟ ಪರ್ವ,4,44
9.		ಯಮಸುತ, ಯಮಧರ್ಮರಾಯನ ಮಗ, ಗದಾ ಪರ್ವ,13,14
10.		ಯಮಸೂನು, ಯಮನ ಮೂಲಕ ಕುಂತಿಯಲ್ಲಿ ಜನಿಸಿದವನಾದ್ದರಿಂದ ಯುಧಿಷ್ಠಿರನಿಗೆ ಯಮಸೂನು ಎಂದು ಹೆಸರು., ಆದಿ ಪರ್ವ,8,85
11.		ಯಮಸೂನು, ಧರ್ಮರಾಯ, ದ್ರೋಣ ಪರ್ವ,7,0
12.		ಯಮಳ, ಅವಳಿ-ಜವಳಿ (ನಕುಲ ಸಹದೇವ), ವಿರಾಟ ಪರ್ವ,10,57
13.		ಯವನೇಶ್ವರ, ಯವನರಾಜ, ದ್ರೋಣ ಪರ್ವ,3,21
14.		ಯವಸಾಂಬು, ಹುಲ್ಲುನೀರು, ಸಭಾ ಪರ್ವ,3,4
15.		ಯವೆ, ಗೋದಿಯ ಕಾಳು, ಆದಿ ಪರ್ವ,14,10
16.		ಯಾಚಕ, ಬೇಡುವ, ಆದಿ ಪರ್ವ,10,3
17.		ಯಾಜ್ಞಿಕ, ಯಜ್ಞ ಮಾಡುವವರು, ಆದಿ ಪರ್ವ,12,22
18.		ಯಾತುಧಾನ, ರಾಕ್ಷಸ, ಕರ್ಣ ಪರ್ವ,22,8, , 
19.		ಯಾನ, ಪಯಣ, ಉದ್ಯೋಗ ಪರ್ವ,3,99
20.		ಯಾನ, ವಾಹನ, ಸಭಾ ಪರ್ವ,1,74
21.		ಯುಗ, ಎರಡು, ವಿರಾಟ ಪರ್ವ,1,20
22.		ಯುಗಳ, ಜೋಡಿ) ಎರಡು ಕಣ್ಣು, ವಿರಾಟ ಪರ್ವ,8,84
23.		ಯುದ್ಧೋದ್ಯುಕ್ತರು, ಯುದ್ಧ ಮಗ್ನರು, ಭೀಷ್ಮ ಪರ್ವ,5,4
24.		ಯುವತಿನಿಕುರುಂಬ, ಮಹಿಳೆಯರ ಗುಂಪು, ಗದಾ ಪರ್ವ,10,14
25.		ಯೋಜನ, ನಾಲ್ಕು ಹರಿದಾರಿ (12 ಮೈಲಿ), ಆದಿ ಪರ್ವ,8,93
26.		ಯೋಧ, ಮಾವಟಿಗ, ಭೀಷ್ಮ ಪರ್ವ,4,81
27.		ಯೋನಿ, ಉತ್ಪತ್ತಿಸ್ಥಾನ, ಉದ್ಯೋಗ ಪರ್ವ,4,68
28.		ಯೋಷಿಜ್ಜನ, ಸ್ತ್ರೀಯರು ?, ಸಭಾ ಪರ್ವ,7,20
ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ

ವರ್ಗ:ಕನ್ನಡ ಸಾಹಿತ್ಯ